Home ಅಪರಾಧ ನೇಹಾ ಹತ್ಯೆ ಆರೋಪಿ ಫಯಾಜ್ ೬ ದಿನ ಸಿಐಡಿ ವಶಕ್ಕೆ

ನೇಹಾ ಹತ್ಯೆ ಆರೋಪಿ ಫಯಾಜ್ ೬ ದಿನ ಸಿಐಡಿ ವಶಕ್ಕೆ

0

ಹುಬ್ಬಳ್ಳಿ: ನೇಹಾ ಹತ್ಯೆ ಆರೋಪಿ ಫಯಾಜ್ ನನ್ನು ಆರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ‌ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. ಮಂಗಳವಾರ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಫಯಾಜ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ. ಇಲ್ಲಿನ ೧ನೇ ಅಧಿಕ ದಿವಾಣಿ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯ ಹುಬ್ಬಳ್ಳಿ ಆದೇಶ ಹೊರಡಿಸಿದೆ. ಎಸ್ಪಿ ವೆಂಕಟೇಶ್ ನೇತೃತ್ವದ ತಂಡ ನ್ಯಾಯಾಲಯಕ್ಕೆ ಆರೋಪಿ ಒಪ್ಪಿಸುವಂತೆ ಅರ್ಜಿ ಸಲ್ಲಿಸಿತ್ತು.‌ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

Exit mobile version