Home ತಾಜಾ ಸುದ್ದಿ ನೇಹಾ ಕೊಲೆ ಪ್ರಕರಣ: ಅಂಜುಮನ್ ಬಂದ್ ಕರೆಗೆ ಬೆಂಬಲ

ನೇಹಾ ಕೊಲೆ ಪ್ರಕರಣ: ಅಂಜುಮನ್ ಬಂದ್ ಕರೆಗೆ ಬೆಂಬಲ

0

ಧಾರವಾಡ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಅಂಜುಮನ್ ಸಂಸ್ಥೆ ನೀಡಿದ್ದ ಪ್ರತಿಭಟನಾ ಕರೆಗೆ ಧಾರವಾಡದ ಇಡೀ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಿದೆ.
ಇಲ್ಲಿಯ ತರಕಾರಿ, ಹಣ್ಣು, ಬಟ್ಟೆ, ಮಾಂಸ ಮಾರಾಟ ಮಾಡುತ್ತಿದ್ದ ಎಲ್ಲ ಮುಸ್ಲಿಂ ವ್ಯಾಪಾರಿಗಳು ಮುಂಜಾನೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ನಗರದ ಮುಖ್ಯ ಮಾರುಕಟ್ಟೆ ಪ್ರದೇಶವಾದ ಸೂಪರ್ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿತ್ತು. ಜೊತೆಗೆ ಪ್ರತಿಯೊಂದು ಅಂಗಡಿಯ ಮುಂದೆ ಜಸ್ಟಿಸ್ ಫಾರ್ ನೇಹಾ ಎಂಬ ಭಿತ್ತಿಪತ್ರ ಹಚ್ಚಿ ನ್ಯಾಯಕ್ಕಾಗಿ ಆಗ್ರಹಿಸಿದರು.

Exit mobile version