ಮುಂಡಗೋಡ: ಮನೆಯ ಮುಂದಿನ ನೀರಿನ ತೊಟ್ಟಿಯಲ್ಲಿ ಮಗು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮದ ಎರಡು ವರ್ಷದ ವಿನಯ ಜಿ. ಕುಂಬಾರ ಎಂಬ ಮಗುವೇ ಮೃತಪಟ್ಟಿದ್ದು, ಮನೆಯ ಮುಂದೆ ಆಟ ಆಡುತ್ತಿದ್ದ ವೇಳೆ ಆಯತಪ್ಪಿ ನೀರಿನತೊಟ್ಟಿಯಲ್ಲಿ ಬಿದ್ದಿದೆ. ಇದನ್ನು ಗಮನಿಸಿದ ಪೋಷಕರು ಮಗುವನ್ನು ತಾಲೂಕಾಸ್ಪತ್ರೆಗೆ ದಾಖಲಿಸುವ ಮುಂಚೆಯೆ ಮಗು ಮೃತಪಟ್ಟಿದೆ. ಈ ಕುರಿತುಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.