Home ತಾಜಾ ಸುದ್ದಿ  ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು

 ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು

0

ಬೀದರ್ : ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಜಾಗದಲ್ಲಿ ಅಗೆದಿರುವ ಗುಂಡಿಗೆ ಬಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಶನಿವಾರ ಸಾವನಪ್ಪಿದ್ದಾನೆ.

ಸಂತೋಷ ಕಾಲೋನಿ ನಿವಾಸಿ ಜಿಶಾನ್ ಇಸ್ಮಾಯಿಲ್ (೧೧) ಸಾವಿಗಿಡಾದ ಬಾಲಕ. ಶಾಲೆ ಆವರಣದಲ್ಲಿ ಆಟ ಆಡಲು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಶನಿವಾರ ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version