Home ನಮ್ಮ ಜಿಲ್ಲೆ ನಿಶ್ಚಿತ ಸ್ಥಳ, ಸಮಯ ಹೇಳಲು ಕಷ್ಟ

ನಿಶ್ಚಿತ ಸ್ಥಳ, ಸಮಯ ಹೇಳಲು ಕಷ್ಟ

0

ಮೈಸೂರು: “ಭಾರತ್ ಅಕ್ಕಿ”ಗೆ ನಿರೀಕ್ಷೆ ಮೀರಿ ಬೇಡಿಕೆ ಬಂದಿದ್ದು, ನಿಶ್ಚಿತ ಸ್ಥಳ ಮತ್ತು ಸಮಯ ಹೇಳಲು ಕಷ್ಟವಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.
ಇಂದು ಮೈಸೂರಿನ ಅಗ್ರಹಾರ ವೃತ್ತದಲ್ಲಿ ಭಾರತ್ ಅಕ್ಕಿ ವಿತರಿಸಲಾಯಿತು ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತ್‌ ಅಕ್ಕಿ ತುಂಬಿರುವ ಲಾರಿ ಚಿತ್ರವನ್ನು ಹಾಕಿ ಕೂಡಲೇ ಅಗ್ರಹಾರ ಸರ್ಕಲ್‌ಗೆ ಬನ್ನಿ ಎಂದು ಪೋಸ್ಟ್‌ ಮಾಡಿದ್ದರು, ಸ್ವಲ್ಪ ಮುಂಚೆ ಹೇಳಿದ್ದರೆ ಚೆನ್ನಾಗಿರುತ್ತಿತ್ತು, ಎಂದು ಕಮೆಂಟ್‌ ಮಾಡಿದ್ದರು, ಅಕ್ಕಿ ವಿರಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಯವರ “ಭಾರತ್ ಅಕ್ಕಿ”ಗೆ ನಿರೀಕ್ಷೆ ಮೀರಿ ಬೇಡಿಕೆ ಬಂದಿದ್ದು, ನಿಶ್ಚಿತ ಸ್ಥಳ ಮತ್ತು ಸಮಯ ಹೇಳಲು ಕಷ್ಟವಾಗುತ್ತಿದೆ. ಹಾಗಾಗಿ ಅಗ್ರಹಾರ ವೃತ್ತದಲ್ಲಿ “ಭಾರತ್ ಅಕ್ಕಿ, ಮೋದಿ ಮಳಿಗೆ” ತೆರೆಯಲು ಯೋಚಿಸುತ್ತಿದ್ದೇವೆ. ನಿಮ್ಮ ಸಲಹೆಗಳಿಗೆ ಸ್ವಾಗತ… ಎಂದಿದ್ದಾರೆ.

Exit mobile version