ಬಳ್ಳಾರಿ: ತುಂಗಭದ್ರಾ ಡ್ಯಾಂ ನ 19 ನೇ ಗೇಟ್ ಕಿತ್ತು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಗೆ ಶುಭ ಸುದ್ದಿ ಕೊಡ್ತೇನೆ ಎಂದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಬಂದ ಬಳಿಕ ಮಾತನಾಡಿದ ತಜ್ಞ ಕನ್ನಯ್ಯ ನಾಯ್ಡು,
ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೇಂಜ್ ಇದೆ.
ಅದನ್ನ ಹಾಕಿದ್ರೆ ನಂತರದಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ಉಳಿದ ಗೇಟ್ ಗಳನ್ನು ಜೋಡಿಸಬಹುದು.
ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೇಂಜ್.
ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡ್ತಿದ್ದೇವೆ.
ಎಲ್ಲಾ ಒಳ್ಳೆಯದಾಗುತ್ತೆ.
ನಾಳೆಯೊಳಗೆ ಗುಡ್ ನ್ಯೂಸ್ ಕೊಡ್ತೇನೆ.
ಆಗ ಸೆಲೆಬ್ರೇಷನ್ ಮಾಡೋಣ ಎಂದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.