ಬಳ್ಳಾರಿ: ಮಧ್ಯವರ್ತಿಗಳು ಮೆಣಸಿನಕಾಯಿ ಹಣ ನೀಡದ ಕಾರಣ ನಾಲ್ವರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬಳ್ಳಾರಿಯ ಸೋಮಸಮುದ್ರ ಗ್ರಾಮದ ರೈತರಿಂದ ಆತ್ಮಹತ್ಯೆ ಯತ್ನ ನಡೆದಿದೆ.
ಒಂದೂವರೆ ವರ್ಷದ ಹಿಂದೆ ಸೋಮಸಮುದ್ರ ಗ್ರಾಮದವರು ಮಧ್ಯವರ್ತಿಗಳಿಗೆ ಮೆಣಸಿನಕಾಯಿ ಮಾರಾಟ ಮಾಡಿದ್ದರು. ರಾಮರೆಡ್ಡಿ, ಸುದರ್ಶನ, ವಿರೂಪಾಕ್ಷ ಎನ್ನುವ ಏಜೆಂಟರ ಮೂಲಕ ಅಗ್ರಗೇಡ್ ಎಂಬ ಕಂಪನಿಗೆ ಮಾರಾಟ ಮಾಡಿದ್ದರು. ರೈತರ ೧.೯೩ ಕೋಟಿ ರೂ.ಮೊತ್ತದ ಮೆಣಸಿನಕಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಹಣ ನೀಡದ ಕಾರಣ ಹನುಮಂತ, ರುದ್ರೇಶ್, ಕೊಣೀರ, ಎಣ್ಣೆ ಶೇಖರ್ ಎಂಬ ರೈತರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಅವರನ್ನು ವಿಮ್ಸ್‌ಗೆ ದಾಖಲು ಮಾಡಲಾಯಿತು.