Home ಅಪರಾಧ ನಕಲಿ ಬಂಗಾರ ಅಡಮಾನ: ಎರಡನೇ ದಿನವು ಮುಂದುವರೆದ ಇ.ಡಿ ದಾಳಿ

ನಕಲಿ ಬಂಗಾರ ಅಡಮಾನ: ಎರಡನೇ ದಿನವು ಮುಂದುವರೆದ ಇ.ಡಿ ದಾಳಿ

0

ಶಿವಮೊಗ್ಗ: ನಕಲಿ ಬಂಗಾರ ಅಡಮಾನ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಎರಡನೇ ದಿನವು ಜಿಲ್ಲೆಯ ವಿವಿಧೆಡೆ ದಾಳಿ (Raid) ಮುಂದುವರೆಸಿದ್ದಾರೆ.
ಶಿವಮೊಗ್ಗ, ತೀರ್ಥಹಳ್ಳಿ ಕೆಲವೆಡೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗದ ಅಚ್ಚುತರಾವ್‌ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಎನ್.ಸುಧೀರ್‌ ಅವರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ (Raid) ನಡೆಸಿದ್ದಾರೆ. ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಕೃಷ್ಣಮೂರ್ತಿ ಭಟ್‌ ಮನೆ ಮೇಲು ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೃಷ್ಣಮೂರ್ತಿ ಭಟ್‌ ಅವರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಆಪ್ತರಾಗಿದ್ದಾರೆ.

Exit mobile version