Home ಅಪರಾಧ ಧಾರವಾತಿ ಆಂಜನೇಯ ದೇವಸ್ಥಾನದ ಬಳಿ ಅಪಘಾತ: ಇಬ್ಬರು ಸಾವು

ಧಾರವಾತಿ ಆಂಜನೇಯ ದೇವಸ್ಥಾನದ ಬಳಿ ಅಪಘಾತ: ಇಬ್ಬರು ಸಾವು

0

ಹುಬ್ಬಳ್ಳಿ: ಧಾರವಾತಿ ಆಂಜನೇಯ ದೇವಸ್ಥಾನದ ಹತ್ತಿರ ಮತ್ತೊಂದು‌ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟವೆರಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಕುಂದಗೋಳ ಪಟ್ಟಣದ ಕುಂಬಾರ ಓಣಿ ನಿವಾಸಿಗಳಾದ ಶಿವರಾಜ ಮತ್ತು ಗದಿಗೆಪ್ಪ ಮೃತಪಟ್ಟವರೆಂದು ಗುರುತಿಸಲಾಗಿದೆ. ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಳೆದ ನಾಲ್ಕು ದಿವಸದ ಹಿಂದೆ ಇಬ್ಬರು ಹಾಗೂ ಕಳೆದ ದಿನ ಓರ್ವ ಸಾವನ್ನಪ್ಪಿದ್ದರು.

Exit mobile version