Home ಅಪರಾಧ ಧಾರವಾಡ ಸ್ಟೇಟಸ್ ಪ್ರಕರಣ: ಈದ್ಗಾ ಗುಂಬಜ್ ಕೆಡವಿದ ಉದ್ರಿಕ್ತರು

ಧಾರವಾಡ ಸ್ಟೇಟಸ್ ಪ್ರಕರಣ: ಈದ್ಗಾ ಗುಂಬಜ್ ಕೆಡವಿದ ಉದ್ರಿಕ್ತರು

0

ಧಾರವಾಡ: ಅಯೋಧ್ಯೆ ರಾಮಮಂದಿರ ಮೇಲೆ‌ ಹಸಿರು ಧ್ವಜ ಹಾರಿಸಿದ ಫೋಟೋ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡಕೋಡ ಈದ್ಗಾ ಮೈದಾನದ ಗುಂಬಜ ಕೆಡವಲಾಗಿದೆ.
ಬುಧವಾರ ತಡಕೋಡ ಗ್ರಾಮದ ಯುವಕ ರಾಮ ಮಂದಿರದ ಮೇಲೆ ಹಸಿರು ಧ್ವಜ ಹಾರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಬಂಧಿಸಿದ್ದರು.
ಆದರೆ, ಬುಧವಾರ‌ ರಾತ್ರಿ‌ ತಡಕೋಡ ಗ್ರಾಮದ ಹಿಂದೂ ಯುವಕರು ಅಲ್ಲಿಯ ಈದ್ಗಾ ಮೈದಾನಕ್ಕೆ‌ ತೆರಳಿ ಅದರಲ್ಲಿಯ ಐದು ಗುಂಬಜ್ ಪೈಕಿ ಒಂದನ್ನು ಕೆಡವಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಕೆಡವಿದ ಗುಂಬಜ್ ರಿಪೇರಿ ಮಾಡಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version