Home ತಾಜಾ ಸುದ್ದಿ ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್

ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್

0

ಬೆಂಗಳೂರು: ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ನಾಡು ಕಟ್ಟಿದ ದೊರೆ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಏಕವಚನ ಪ್ರಯೋಗ ಮಾಡಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಜನಾನುರಾಗಿ ರಾಜಮನೆತನದ ಬಗ್ಗೆ ಎಷ್ಟು ದ್ವೇಷವಿದೆ ಎನ್ನುವುದು ಗುಟ್ಟೇನು ಅಲ್ಲ.
ಈಗ ಯದುವಂಶದ ಕುಡಿ ಶ್ರೀ ಯದುವೀರ್ ಒಡೆಯರ್ ಅವರಿಗೆ ಮೈಸೂರಿನಿಂದ ಬಿಜೆಪಿ ಟಿಕೆಟ್ ಸಿಕ್ಕ ಕೂಡಲೇ ರಾಜಮನೆತನದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ನಡೆ ನೋಡಿದರೆ ತವರು ಜಿಲ್ಲೆಯಲ್ಲೇ ಲೋಕಸಭೆ ಚುನಾವಣೆಯ ಸೋಲಾಗುತ್ತಿರುವುದು ಅವರ ನಿದ್ದೆ ಕೆಡಿಸಿದಂತಿದೆ ಎಂದಿದ್ದಾರೆ.

Exit mobile version