ಮೈಸೂರು: ದೇಶದ ವಿಚಾರ ಬಂದಾಗ ಕಾಂಗ್ರೆಸ್ ಯಾವಾಗಲೂ ಸ್ಪಷ್ಟ ನಿಲುವು ಹೊಂದಿದೆ ಎಂದು ಗೃಹ ಸಚಿವ ಆರ್ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು, ಒಂದು ವೇಳೆ ರಾಜಕಾರಣ ಮಾಡಿದರೆ ಅದಕ್ಕಿಂತ ಕೀಳು ಬೇರೆ ಯಾವುದು ಇಲ್ಲ, ಈ ಸಂದರ್ಭದಲ್ಲಿ ಸರ್ವ ಪಕ್ಷ ಸಭೆ ಕರೆದಿರುವುದು ಅತ್ಯಂತ ಸೂಕ್ತ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ಸಂಪೂರ್ಣ ಸಹಕಾರ ನೀಡಲಿದೆ.
ದೇಶದ ವಿಚಾರ ಬಂದಾಗ ಕಾಂಗ್ರೆಸ್ ಯಾವಾಗಲೂ ಸ್ಪಷ್ಟ ನಿಲುವು ಹೊಂದಿದೆ, ಹಿಂದೆ ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಜೊತೆ ಯುದ್ದವನ್ನೇ ನಡೆಸಿದೆ. ಇಂದಿರಾಗಾಂಧಿ ಕಾಲದಲ್ಲಿ ದೇಶಕ್ಕಾಗಿ ಯುದ್ದವಾಗಿದೆ. ಘಟನೆಗೆ ಮಿಲಿಟರಿ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಈ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಕಾಶ್ಮೀರದಲ್ಲಿ ಅಟ್ಯಾಕ್ ಹಿನ್ನೆಲೆ ನಮ್ಮ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಲ್ಲಾ ಕಡೆಗಳನ್ನು ಅಲರ್ಟ್ ಮಾಡಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಗಳ ಆಂತರಿಕ ಸಭೆ ನಡೆಸಲಾಗಿದೆ, ದಾಳಿಯಲ್ಲಿ ಮೃತಪಟ್ಟವರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ ಎಂದರು.