Home ನಮ್ಮ ಜಿಲ್ಲೆ ಚಿಕ್ಕಮಗಳೂರು ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್

ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್

0

ಚಿಕ್ಕಮಗಳೂರು: ರಾಮಮಂದಿರ ಉದ್ಘಾಟನೆ ವೇಳೆ ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿ ದರು.
ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ರಾಮಮಂದಿರ ಮಂತ್ರಾಕ್ಷತೆ ಮನೆ ಮನೆಗೆ ಹಂಚಿದ ನಂತರ ಮಾತನಾಡಿದ ಅವರು ಬಿ.ಕೆ ಹರಿಪ್ರಸಾದ್ ಹೇಳಿಕೆ ಇದರ ಒಂದು ಉದಾಹರಣೆ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಮಾನಸಿಕ ಸ್ಥಿತಿಯೇ ಕೋಮು ಗಲಭೆ ಸೃಷ್ಟಿಸುವುದು, ಪಿಎಫ್ಐ ನಂತಹ ದೇಶ ದ್ರೋಹಿಗಳ ,ಭಯೋತ್ಪಾದಕರ ಕೇಸ್ ಗಳನ್ನು ಹಿಂದಕ್ಕೆ ಪಡೆಯುವುದಾಗಿದೆ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಭಯೋತ್ಪಾದಕ ದಾಳಿ ನಡೆದಿವೆ. ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಪ್ಲಾನ್ ನ ಪ್ರಕರಣಗಳು ಮಂಗಳೂರು ಪುತ್ತೂರು ಹುಬ್ಬಳ್ಳಿ ಬಳ್ಳಾರಿ ಗಳಲ್ಲಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಇವುಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಈ ಮೂಲಕ ದೇಶ ದ್ರೋಹಿಗಳನ್ನು ರಕ್ಷಿಸುವ ಕೆಲಸ ನಿರಂತರವಾಗಿ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ನಡೆಸಿದರು. ಚಿಕ್ಕಮಗಳೂರಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಬಗ್ಗೆ ಪ್ರಸ್ತಾಪಿಸಿದ ಅವರು ಇಂತಹ ಕೇಸ್ ಗಳನ್ನು ಮುಚ್ಚುಹಾಕಿದ್ರು ಆಶ್ಚರ್ಯ ಪಡಬೇಕಿಲ್ಲ ಇದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಸ್ವಭಾವ ಎಂದಿದ್ದಾರೆ. ಕಾಂಗ್ರೆಸ್ ಮಾಡಿರುವ ಕೋಮು ದಳ್ಳುರಿ ಬಗ್ಗೆ ಕಿವಿಗೊಡುವುದು ಬೇಡ ಎಲ್ಲರೂ ರಾಮ ಭಜನೆ ಮಾಡಿ ಎಂದು ಹೇಳಿದ್ದಾರೆ.

Exit mobile version