ನವದೆಹಲಿ: ಅಸ್ಸಾಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ಸ್ (ಯುಪಿಪಿಎಲ್) ಅಮಾನತುಗೊಂಡ ನಾಯಕನೊಬ್ಬ ೫೦೦ ರೂಪಾಯಿ ನೋಟುಗಳ ಕಟ್ಟನ್ನು ಹಾಸಿಗೆಯಾಗಿ ಮಾಡಿಕೊಂಡು ಅದನ್ನೇ ಮೈಮೇಲೆ ಹರಡಿ ಕೊಂಡು ಮಲಗಿರುವ ದೃಶ್ಯ ವೈರಲ್ ಆಗಿದೆ. ಯುಪಿ ಪಿಎಲ್‌ನ ಗ್ರಾಮ ಮಂಡಳಿ ಅಭಿವೃದ್ಧಿ ಸಮಿತಿಯ ಸದಸ್ಯ ಬೆಂಜಮಿನ್ ಬಾಸುಮತರಿಯ ಕೇವಲ ಟವೆಲ್ ಒಂದನ್ನು ಕಟ್ಟಿಕೊಂಡು ನೋಟಿನ ಕಂತೆಗಳ ಮೇಲೆ ಮಲಗಿರುವುದು ವಿವಾದಕ್ಕೆ ಕಾರಣವಾಗಿದೆ. ಇದೊಂದು ಹಳೇ ದೃಶ್ಯವಾಗಿದ್ದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿರೋಧಿಗಳು ಈ ದೃಶ್ಯವನ್ನು ಹರಿಯಬಿಟ್ಟಿದ್ದಾರೆ ಎಂದು ಬಾಸುಮತರಿ ಆಪ್ತರೊಬ್ಬರು ಹೇಳಿದ್ದಾರೆ. ಯುಪಿಪಿಎಲ್‌ನ ಮುಖ್ಯಸ್ಥ ಪ್ರಮೋದ್ ಬೋರೋ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ.