Home ತಾಜಾ ಸುದ್ದಿ ದೀಡ್ ನಮಸ್ಕಾರದೊಂದಿಗೆ 600 ಕಿ.ಮೀ. ಕ್ರಮಿಸುತ್ತಿರುವ ಭಕ್ತರು

ದೀಡ್ ನಮಸ್ಕಾರದೊಂದಿಗೆ 600 ಕಿ.ಮೀ. ಕ್ರಮಿಸುತ್ತಿರುವ ಭಕ್ತರು

0

ಬಾಗಲಕೋಟೆ(ರಬಕವಿ-ಬನಹಟ್ಟಿ): ಆಂಧ್ರದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಸುಮಾರು ೬೦೦ ಕಿ.ಮೀ. ದೂರ ಬೆಳಗಾವಿ ಜಿಲ್ಲೆಯ ಇಬ್ಬರು ಭಕ್ತರು ದೀಡ್ ನಮಸ್ಕಾರದೊಂದಿಗೆ ತೆರಳುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಅಡಿವೆಪ್ಪ ಕಟಾರವಿ(೪೦) ಹಾಗೂ ಸಂಬಂಧಿ ಮಹಾನಂದಾ ಸುನೀಲ ಚನಗೌಡರ(೪೮) ಇಂಥಹ ಕಾರ್ಯದಲ್ಲಿ ತೊಡಗಿರುವುದು ವಿಶೇಷವಾಗಿದೆ.
ಇವರು ಪ್ರತಿವರ್ಷ ಯುಗಾದಿ ಪ್ರಯುಕ್ತ ಮಲ್ಲಿಕಾರ್ಜುನ ದೇವರ ರಥೋತ್ಸವ ಕಾರ್ಯಕ್ರಮಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ಈ ಬಾರಿ ಹರಕೆಯೊಂದಿಗೆ ದೀಡ್ ನಮಸ್ಕಾರ ಹಾಕುತ್ತ ತೆರಳುತ್ತಿದ್ದಾರೆ.
ಇವರಿಗೆ ಸಹಾಯಕರಾಗಿ ರಾಜು ತೊದಲಬಾಗಿ ಹಾಗೂ ಗಂಗವ್ವ ಅಂಬಿ ಪಾದಯಾತ್ರೆಯೊಂದಿಗೆ ಇವರ ಜೊತೆಗಿದ್ದಾರೆ. ಕಳೆದ ಭಾನುವಾರದಂದು ತಮ್ಮ ಮನೆಯಿಂದ ದೀಡ್‌ನಮಸ್ಕಾರದೊಂದಿಗೆ ಹೊರಟಿರುವ ಇವರು ಮಾ.೩೦ ರಂದು ಜರುಗುವ ಯುಗಾದಿ ಕಾರ್ಯಕ್ರಮಕ್ಕೆ ಶ್ರೀಶೈಲ ತಲುಪಲಿದ್ದಾರೆ.

Exit mobile version