Home ತಾಜಾ ಸುದ್ದಿ ದಾವಣಗೆರೆ ಜಿಲ್ಲೆಯಲ್ಲಿ ಗುಡುಗ ಸಹಿತ ಸುರಿದ ಮಳೆ

ದಾವಣಗೆರೆ ಜಿಲ್ಲೆಯಲ್ಲಿ ಗುಡುಗ ಸಹಿತ ಸುರಿದ ಮಳೆ

0

ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ತಡರಾತ್ರಿ ಸುಮಾರು 2.30 ಗಂಡೆಯಿಂದ ಗುಡುಗು ಸಹಿತ ಬಿರುಸಾದ ಮಳೆ ಸುರಿದಿದೆ.
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹರಿಹರ ಹಾಗೂ ಜಗಳೂರು ತಾಲೂಕಿನಲ್ಲಿ ಜೋರಾದ ಮಳೆ ಸುರಿದಿದೆ. ತಡರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬಿರುಸಾದ ಮಳೆ ಸುರಿದ ಪರಿಣಾಮ ಅಡಿಕೆ ತೋಟಗಳು, ಜಮೀನಿನಲ್ಲಿ ನೀರು ನಿಂತಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಿದೆ. ಅಲ್ಲದೇ ಅಂತರ್ಜಲ ಮಟ್ಟ ಕುಸಿತದಿಂದ ನೀರಿಲ್ಲದೆ ಒಣಗುತ್ತಿದ್ದ ಅಡಿಕೆ ತೋಟಗಳು, ತೆಂಗಿನ ತೋಟಗಳು, ಬಾಳೆ ಗಿಡಗಳಿಗೆ ಈಗ ಜೀವ ಬಂತಂತಾಗಿದೆ. ನಸುಕಿನಿಂದ ಬೆಳಗ್ಗೆಯವರಿಗೆ ಸುರಿದ ಮಳೆ ಈಗ ತಗ್ಗಿದ್ದು, ಸೂರ್ಯನ ದರ್ಶನ ಆಗಿದೆ.

Exit mobile version