Home ತಾಜಾ ಸುದ್ದಿ ದಾಳಿಯ ಹಿಂದಿನ ಉದ್ದೇಶ, ಸಮಾಜದ ವಿಭಜನೆ

ದಾಳಿಯ ಹಿಂದಿನ ಉದ್ದೇಶ, ಸಮಾಜದ ವಿಭಜನೆ

0

ಶ್ರೀನಗರ: ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ನಾವು ಬೆಂಬಲಿಸಲು ಸಿದ್ಧರಿದ್ದೇವೆ. ಈ ದಾಳಿಯ ಹಿಂದಿನ ಉದ್ದೇಶ ಸಮಾಜವನ್ನು ವಿಭಜಿಸುವುದಾಗಿದೆ. ಭಯೋತ್ಪಾದಕರು ಮಾಡಲು ಬಯಸಿದ್ದನ್ನು ನಾವು ಸೋಲಿಸಲು ಪ್ರತಿಯೊಬ್ಬ ಭಾರತೀಯರೂ ಒಗ್ಗಟ್ಟಿನಿಂದ ನಿಲ್ಲುವುದು ಬಹಳ ಮುಖ್ಯ ಎಂದು ಕಾಂಗ್ರೆಸ್‌ ನಾಯಕ್‌ ರಾಹುಲ್‌ ಗಾಂಧಿ ಹೇಳಿದ್ದಾರೆ.
ಶ್ರೀನಗರದ ಆಸ್ಪತ್ರೆಯಲ್ಲಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಭೇಟಿಯಾದ ರಾಹುಲ್ ಗಾಂಧಿ ನಂತರ ಮಾತನಾಡಿ ಈ ದಾಳಿಯು ಸಮಾಜದಲ್ಲಿ ಜನರ ಮನಸ್ಸು ಒಡೆಯುವ ಉದ್ದೇಶದಿಂದ ಮಾಡಲಾಗಿದೆ. ಭಯೋತ್ಪಾದನೆಯನ್ನು ಸೋಲಿಸಲು ಎಲ್ಲರೂ ಒಟ್ಟಾಗಿ ನಿಲ್ಲಬೇಕು, ಜೊತೆಗೆ ದಾಳಿಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾನು ಸಾಂತ್ವನ ಹೇಳುತ್ತಿದ್ದೇನೆ. ಇಡೀ ದೇಶವು ಒಂದಾಗಿ ನಿಂತಿದೆ ಎಂದು ಎಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ ಎಂದರು.

Exit mobile version