Home News ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ

ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ

ಮಂಗಳೂರು: ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ‌ ಎಂದರು.
ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು ಎಂದರು.
ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ ಎಂದರು. ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.

Exit mobile version