Home ಅಪರಾಧ ತಾಯಿಯನ್ನೇ ಕೊಲೆಗೈದ ಮಗ: ಬಂಧನ

ತಾಯಿಯನ್ನೇ ಕೊಲೆಗೈದ ಮಗ: ಬಂಧನ

0

ಕಲಬುರಗಿ: ಊರಿಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಮಗ ತಾಯಿಯನ್ನೇ ಕೊಲೆ ಮಾಡಿದ ಘಟನೆ ಚಿತ್ತಾಪುರ ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ನಡೆದಿದೆ.
ದೇವಕಮ್ಮ ದೊಡ್ಡಬೀರಪ್ಪ ಪೂಜಾರಿ(72) ಕೊಲೆಯಾದ ವೃದ್ಧೆ. ಜಟ್ಟೆಪ್ಪ ದೊಡ್ಡಬೀರಪ್ಪ ಪೂಜಾರಿ(34) ಕೊಲೆ ಆರೋಪಿ. ದೇವಕಮ್ಮ ಅವರು ಕಳೆದ ನಾಲ್ಕೈದು ದಿನಗಳ ಹಿಂದೆ ತಾಲೂಕಿನ ಲಕ್ಷ್ಮೀಪುರವಾಡಿ ಗ್ರಾಮಕ್ಕೆ ಹೋಗಿ ಶನಿವಾರ ಬೆಳಿಗ್ಗೆ ರಾಜೋಳ್ಳಾ ಗ್ರಾಮಕ್ಕೆ ಬಂದಿದ್ದರು. ಊರಿಗೆ ಏಕೆ ಹೋಗಿದ್ದಿ, ನನ್ನ ಹೊಟ್ಟೆ ಬಟ್ಟೆ ಯಾರು ನೋಡಬೇಕು ಎಂದು ಜಟ್ಟೆಪ್ಪ ತಾಯಿಯೊಂದಿಗೆ ಜಗಳ ಮಾಡಿ, ಕಟ್ಟಿಗೆಯಿಂದ ಹೊಡೆದಿದ್ದಾನೆ. ಭಯದಿಂದ ದೇವಕಮ್ಮ ಅವರು ಮನೆಯಿಂದ ಹೊರಗೆ ಓಡಿ ಹೋಗುವಾಗ ಮನೆ ಹತ್ತಿರ ಕೆಸರಿನಲ್ಲಿ ಬಿದ್ದಿದ್ದಾರೆ. ಮತ್ತೆ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಟ್ಟೆಪ್ಪಗೆ 12 ವರ್ಷಗಳ ಹಿಂದೆ ಹಂದರಕಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಜಟ್ಟೆಪ್ಪನ ಕಿರುಕುಳ ತಾಳದೆ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿನಲ್ಲೇ ಉಳಿದಿದ್ದಾರೆ. ತಾಯಿ ಮತ್ತು ಮಗ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ತಾಯಿಯೇ ಮಗನಿಗೆ ಅಡುಗೆ ಮಾಡುವುದು, ಬಟ್ಟೆ ತೊಳೆಯುವುದು ಮಾಡುತ್ತಿದ್ದರು ಎಂದು ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರು ಮಾಹಿತಿ ನೀಡಿದರು.

Exit mobile version