Home ನಮ್ಮ ಜಿಲ್ಲೆ ಕೊಪ್ಪಳ ಡ್ಯಾಂಗೆ ವಿಪಕ್ಷ ನಾಯಕ ಆರ್.ಅಶೋಕ, ವಿಜಯೇಂದ್ರ, ಬೊಮ್ಮಾಯಿ ಭೇಟಿ ಇಂದು

ಡ್ಯಾಂಗೆ ವಿಪಕ್ಷ ನಾಯಕ ಆರ್.ಅಶೋಕ, ವಿಜಯೇಂದ್ರ, ಬೊಮ್ಮಾಯಿ ಭೇಟಿ ಇಂದು

0

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಸೋಮವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ೧೯ನೇ ಕ್ರಸ್ಟ್ ಗೇಟ್ ಕಿತ್ತುಹೋಗಿರುವುದನ್ನು ಪರಿಶೀಲಿನೆ ನಡೆಸುವರು.

ಬೆಳಿಗ್ಗೆ ೧೨.೩೦ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಜಲಾಶಯಕ್ಕೆ ಭೇಟಿ, ವೀಕ್ಷಣೆ ಮಾಡುವರು. ಇನ್ನು ಮಧ್ಯಾಹ್ನ ೧ಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ, ಅಣೆಕಟ್ಟು ವೀಕ್ಷಿಸುವವರು. ಬಳಿಕ ಕ್ರಸ್ಟ್ ಗೇಟ್ ನಲ್ಲಿ ಆದ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಮತ್ತು ಟಿ.ಬಿ.ಬೋರ್ಡಿನ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಚರ್ಚಿಸುವರು.

Exit mobile version