Home ಕ್ರೀಡೆ ಟಾಪ್ ಪೈವ್ ಗೆ ಲಗ್ಗೆ ಇಟ್ಟ ಆರ್‌ಸಿಬಿ

ಟಾಪ್ ಪೈವ್ ಗೆ ಲಗ್ಗೆ ಇಟ್ಟ ಆರ್‌ಸಿಬಿ

0

ಸತತ ೫ನೇ ಗೆಲುವಿನ ಮೂಲಕ ೫ ನೇ ಸ್ಥಾನ ತಲುಪಿದ RCB

ಬೆಂಗಳೂರು: ಆರ್‌ಸಿಬಿ ತಂಡದ ಪ್ಲೇ ಆಫ್ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. 
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ   ಆರ್‌ಸಿಬಿ ಗೆಲುವಿನೊಂದಿಗೆ ಆರ್‌ಸಿಬಿ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಮೊದಲು ಟಾಸ್ ಗೆದ್ದ ದೆಹಲಿ ಕ್ಯಾಪಿಟಲ್ಸ್ ತಂಡವು ಫೀಲ್ಡಿಂಗ್ ಅನ್ನು ಆಯ್ದುಕೊಂಡಿತು. 

ಮೊದಲ ಬ್ಯಾಟಿಂಗ್  ಮಾಡಿದ ಬೆಂಗಳೂರು ತಂಡವು  20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 187 ರನ್ ಗಳನ್ನು ಗಳಿಸಿತು. 188 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ್ ತಂಡವು 19.1 ಓವರ್ ಗಳಲ್ಲಿ 140 ರನ್ ಗಳಿಸಿ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.