Home ಸುದ್ದಿ ದೇಶ ಜೈಲರ್ ಚಿತ್ರದ ನಟ ‘ಮಾರಿಮುತ್ತು’ ಹೃದಯಘಾತದಿಂದ ಸಾವು

ಜೈಲರ್ ಚಿತ್ರದ ನಟ ‘ಮಾರಿಮುತ್ತು’ ಹೃದಯಘಾತದಿಂದ ಸಾವು

0

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದ ಮಾರಿಮುತ್ತು ವಿಧಿವಶರಾಗಿದ್ದಾರೆ. ಜಿ.ಮಾರಿಮುತ್ತು (57) ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ವಾಹಿನಿಯೊಂದರ ಧಾರಾವಾಹಿಯ ಡಬ್ಬಿಂಗ್‌ನಲ್ಲಿ ತೊಡಗಿದ್ದ ವೇಳೆ ಕುಸಿದು ಬಿದ್ದಿದ್ದರು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ. ಅವರ ಪಾರ್ಥಿವ ಶರೀರವನ್ನು ಚೆನ್ನೈನ ವಿರುಗಂಬಾಕ್ಕಂ ಪ್ರದೇಶದ ಭಾಸ್ಕರ್ ಕಾಲೋನಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುತ್ತದೆ. ಇಂದು ಮಧ್ಯಾಹ್ನ 3 ಗಂಟೆಗೆ ಥೇಣಿಯಲ್ಲಿರುವ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

Exit mobile version