Home ತಾಜಾ ಸುದ್ದಿ ಜೆ.ಪಿ.ಸಿ ಅಧ್ಯಕ್ಷರು ಭೇಟಿ ನೀಡುತ್ತಿರುವುದು ವಿಜಯಪುರಕ್ಕೆ, ಇಸ್ಲಾಮಾಬಾದ್‌ಗಲ್ಲ

ಜೆ.ಪಿ.ಸಿ ಅಧ್ಯಕ್ಷರು ಭೇಟಿ ನೀಡುತ್ತಿರುವುದು ವಿಜಯಪುರಕ್ಕೆ, ಇಸ್ಲಾಮಾಬಾದ್‌ಗಲ್ಲ

0

ಬೆಂಗಳೂರು: ವಿಜಯಪುರಕ್ಕೆ ಜೆಪಿಸಿ ಚೇರ್ಮನ್ ಆಗಮಿಸುತ್ತಿದ್ದು, ಮಾಹಿತಿ ನೀಡಲು ತಯಾರಿ ಮಾಡಿಕೊಂಡಿದ್ದೇವೆ. ಇಂದು ಮಧ್ಯಾಹ್ನ 12 ಗಂಟೆಗೆ ಜೆಪಿಸಿ ಚೇರ್ಮನ್ ಬರ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಜೆಪಿಸಿ ಅಧ್ಯಕ್ಷ ರಾಜ್ಯಕ್ಕೆ ಬೇಟಿ ಅನಧಿಕೃತ ಎಂಬ ಸಚಿವ ಜಮೀರ್ ಅಹ್ಮದ್‌ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಜೆ.ಪಿ.ಸಿ ಅಧ್ಯಕ್ಷರು ಭೇಟಿ ನೀಡುತ್ತಿರುವುದು ನಮ್ಮ ವಿಜಯಪುರಕ್ಕೆ. ಪಾಕಿಸ್ತಾನಿನ ಇಸ್ಲಾಮಾಬಾದ್ ಅಥವಾ ಲಾಹೋರ್ ಗಲ್ಲ. ಸಾಕ್ಷರತೆ ಇಲ್ಲದೆ ಮಾತನಾಡಿದರೆ ಏನೆಲ್ಲಾ ಪ್ರಮಾದ ಆಗುತ್ತೆ ಎನ್ನುವುದಕ್ಕೆ ನಿಮ್ಮ ಮಾತುಗಳೇ ಸಾಕ್ಷಿ. ದಯವಿಟ್ಟು ಒಂದಷ್ಟು ಓದಿಕೊಳ್ಳಿ, ಅಧ್ಯಯನ ಮಾಡಿ, ಗೊತ್ತಿಲ್ಲದಿದ್ದರೆ ತಜ್ಞರನ್ನು, ಪ್ರಾಜ್ಞರನ್ನು ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ.

Exit mobile version