Home News ಜಾಗತಿಕ ಬ್ರ್ಯಾಂಡ್‌ ಆಗುವತ್ತ ನಮ್ಮ ಮೈಸೂರು ಸ್ಯಾಂಡಲ್

ಜಾಗತಿಕ ಬ್ರ್ಯಾಂಡ್‌ ಆಗುವತ್ತ ನಮ್ಮ ಮೈಸೂರು ಸ್ಯಾಂಡಲ್

ಮೈಸೂರು ಸ್ಯಾಂಡಲ್ 80 ದೇಶಗಳಿಗೆ ರಫ್ತು, ವಾರ್ಷಿಕ 34 ಸಾವಿರ ಟನ್ ಸಾಬೂನು ಉತ್ಪಾದನೆ.

ಬೆಂಗಳೂರು: ವಿದೇಶಿ ಮಾರುಕಟ್ಟೆಗೆ ಕಾಲಿಟ್ಟಿರುವ ಮೈಸೂರು ಸ್ಯಾಂಡಲ್ 80 ದೇಶಗಳಿಗೆ ರಫ್ತು ಹೆಚ್ಚಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ನಮ್ಮ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಈಗ ಗಂಧದ ಸುವಾಸನೆಯಷ್ಟೇ ಅಲ್ಲದೇ ಮಲ್ಲಿಗೆ, ಗುಲಾಬಿಯ ಘಮ ಪಸರಿಸುತ್ತಿದೆ. ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತ, ಲಾಭಗಳಿಕೆಯ ಹಾದಿಯಲ್ಲಿ ಸಾಗುತ್ತಿರುವ ನಮ್ಮ #KSDL ಸಂಸ್ಥೆಯು ಇದೀಗ ಬೇಡಿಕೆಗೆ ಅನುಗುಣವಾಗಿ ನೂತನ ಸಾಬೂನುಗಳನ್ನು ಉತ್ಪಾದಿಸುತ್ತಿದೆ. ಮಲ್ಲಿಗೆ, ಲ್ಯಾವೆಂಡರ್, ಗುಲಾಬಿ, ನಿಂಬೆ, ಅರಿಶಿನ ಮುಂತಾದ ವಿಭಿನ್ನ ಸಾಬೂನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ನೂತನ ಉತ್ಪನ್ನಗಳ ಪರಿಚಯದಿಂದಾಗಿ, ವಾರ್ಷಿಕ 26 ಸಾವಿರ ಟನ್ ಸಾಬೂನು ಉತ್ಪಾದಿಸುತ್ತಿದ್ದ ಸಂಸ್ಥೆ 34 ಸಾವಿರ ಟನ್ ಉತ್ಪಾದನೆ ಮಾಡಲಿದೆ. ಈಗಾಗಲೇ ವಿದೇಶಿ ಮಾರುಕಟ್ಟೆಗೆ ಕಾಲಿಟ್ಟಿರುವ ಮೈಸೂರು ಸ್ಯಾಂಡಲ್ 80 ದೇಶಗಳಿಗೆ ರಫ್ತು ಹೆಚ್ಚಿಸಿದೆ. ಈ ಎಲ್ಲಾ ಕ್ರಮಗಳಿಂದ ಪ್ರಸಕ್ತ ವರ್ಷ 400 ಕೋಟಿಗೂ ಅಧಿಕ ಲಾಭ ಗಳಿಸುವ ನಿರೀಕ್ಷೆಯಿದೆ. ಮೈಸೂರು ಸ್ಯಾಂಡಲ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿಸುವ ಛಲ ನಮ್ಮ ಸರ್ಕಾರದ್ದಾಗಿದೆ ಎಂದಿದ್ದಾರೆ.

Exit mobile version