Home ಅಪರಾಧ ಜಮೀನಿಗಾಗಿ ಮಾರಾಮಾರಿ: ಇಬ್ಬರ ಮೇಲೆ ಹಲ್ಲೆ

ಜಮೀನಿಗಾಗಿ ಮಾರಾಮಾರಿ: ಇಬ್ಬರ ಮೇಲೆ ಹಲ್ಲೆ

0

ಬೆಳಗಾವಿ: ಸಮುದಾಯದ ಭವನ ನಿರ್ಮಾಣದ ಜಮೀನಿಗಾಗಿ ಗಲಾಟೆ ನಡೆದು ಉಂಟಾದ ಮಾರಾಮಾರಿಯಲ್ಲಿ 20ಕ್ಕೂ ಹೆಚ್ಚು ಜನರು ಇಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ ಘಟನೆ ನಗರದ ಗಣಾಚಾರಿ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ.
ರಾಜು ತಳವಾರ, ಸುದೇಶ ಲಾಠೆಗೆ ಎಂಬುವರ ಮೇಲೆ ಹಲ್ಲೆ ನಡೆದು ಗಾಯಗೊಂಡಿದ್ದಾರೆ. ಕೆಲವರು ಮಹಾನಗರ ಪಾಲಿಕೆಯ ಜಾಗವನ್ನು ಕಬ್ಜಾ ಮಾಡಿದ್ದರೆಂದು ಹೇಳಲಾಗಿದ್ದು, ಪಾಲಿಕೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅತಿಕ್ರಮಣ ತೆರವುಗೊಳಿಸಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಹಿನ್ನೆಲೆಯಲ್ಲಿ ಈ ವೇಳೆ ಮಾರಾಮಾರಿ ನಡೆಯಿತೆಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜನರು ಇಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರೆಂದು ಹೇಳಲಾಗಿದೆ. ಗಾಯಾಳುಗಳನ್ನು ಸ್ಥಳೀಯರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Exit mobile version