ಉತ್ತರ ಕೋಲ್ಕತ್ತಾದ ಲೋವರ್ ನರ್ಸರಿಯಲ್ಲಿ ಓದುತ್ತಿರುವ ಮೂರು ವರ್ಷ, ಹತ್ತು ತಿಂಗಳ ವಯಸ್ಸಿನ ವಿದ್ಯಾರ್ಥಿ ಅನೀಶ್ ಸರ್ಕಾರ್ ಇಡೀ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದಾರೆ. ಫಿಡೆ ರೇಟಿಂಗ್‌ನಲ್ಲಿ ೧೫೫೫ನೇ ಸ್ಥಾನ ಪಡೆಯುವ ಮೂಲಕ ಅನೀಶ್ `ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿ’ ಹೊರಹೊಮ್ಮಿದ್ದಾರೆ.
ಅನೀಶ್ ಸರ್ಕಾರ್ ತನ್ನ ಅಕಾಡೆಮಿಯಲ್ಲಿ ಮೇಜಿನ ಮೇಲೆ ಇರಿಸಲಾಗಿರುವ ಚೆಸ್‌ಬೋರ್ಡ್ ತಲುಪಲು ಮೂರು ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಕುಳಿತುಕೊಳ್ಳಬೇಕು. ಚೆಸ್ ಕಾಯಿಗಳನ್ನು ಚಲಿಸಲು ಮೇಜಿನ ಮೇಲೆ ಕೈಗಳನ್ನು, ಕುರ್ಚಿಯ ಮೇಲೆ ಕಾಲುಗಳನ್ನು ಇಟ್ಟುಕೊಳ್ಳಬೇಕು. ಆದರೆ ಈ ಪೋರ ಮಾಡಿದ ಸಾಧನೆ ಮಾತ್ರ ಹುಬ್ಬೇರಿಸುವಂಥದ್ದು.
