ನವದೆಹಲಿ: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವಕ್ಕೆ ನಿದರ್ಶನ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಜರ್ಮನಿ ಪ್ರವಾಸದಲ್ಲಿರುವ ಸಚಿವರು, ಚುನಾವಣಾ ಫಲಿತಾಂಶ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಅದರಂತೆ ಜಮ್ಮು-ಕಾಶ್ಮೀರದಲ್ಲೂ ಬಿಜೆಪಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಿದೆ ಎಂದು ಜೋಶಿ ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಟೀಕಿಸಿರುವ ಜೋಶಿ, ಹರಿಯಾಣ ಚುನಾವಣಾ ಹಲಿತಾಂಶವೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಪ್ರಬಲ ಪಕ್ಷವಾಗಿ ಮುನ್ನಡೆದಿದೆ. ಬಹುಮತಕ್ಕೆ ಬೇಕಿದ್ದ ಮ್ಯಾಜಿಕ್ ನಂಬರ್ ದಾಟಿ ಹ್ಯಾಟ್ರಿಕ್ ಸಾಧನೆ ತೋರಿದ್ದು, ಕಾಂಗ್ರೆಸ್ ಬೇಕಾ ಕಚ್ಚಿದೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ಬಿಜೆಪಿ: ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ನಂತರ ನಡೆದ ಈ ಚುನಾವಣೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಿದೆ ಮತ್ತು ಬಿಜಿಪಿಯ ಬೆಳವಣಿಗೆಗೆ ಹೊಸ ಹೊಳಪು ಮೂಡಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದ್ದಾರೆ.