Home ತಾಜಾ ಸುದ್ದಿ ಚಿತ್ತಾ ಮಳೆಗೆ ನಾಲ್ಕು ಮನೆ ಕುಸಿತ

ಚಿತ್ತಾ ಮಳೆಗೆ ನಾಲ್ಕು ಮನೆ ಕುಸಿತ

0

ಇಳಕಲ್ : ನಗರದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಶನಿವಾರ ಬೆಳಿಗ್ಗೆ ಸುರಿದ ಚಿತ್ತಾ ಮಳೆಯಿಂದಾಗಿ ನಾಲ್ಕು ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ ಇಲಾಖೆಯ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರದಂದು ಬೆಳಿಗ್ಗೆ ನಾಲ್ಕು ಗಂಟೆಗೆ ಸುರಿಯಲು ಆರಂಭವಾಗಿ ಮುಂಜಾನೆ ಏಳು ಗಂಟೆಯವರೆಗೆ ದೊಡ್ಡ ಪ್ರಮಾಣದಲ್ಲಿ ಸುರಿಯಿತು. ಈ ಮಳೆ ಗ್ರಾಮೀಣ ಪ್ರದೇಶಗಳಲ್ಲಿ ಜೋರಾಗಿ ಸುರಿದಿದ್ದು ನಾಲ್ಕು ಮನೆಗಳು ಬೇರೆಬೇರೆ ಗ್ರಾಮಗಳಲ್ಲಿ ಒಂದೊಂದು ಮನೆ ಬಿದ್ದಿವೆ.
ತಾಲೂಕಿನ ಜಂಬಲದಿನ್ನಿ, ಚಿನ್ನಾಪುರ ಎಸ್ ಕೆ ಮತ್ತು ಸೋಮಲಾಪುರ, ನಿಡಸನೂರ ಗ್ರಾಮದಲ್ಲಿ ತಲಾ ಒಂದು ಮನೆ ಬಿದ್ದಿವೆ ಎಂದು ತಹಸೀಲ್ದಾರ ಕಾರ್ಯಾಲಯದ ಪ್ರಕಾಶ ವಜ್ಜಲ ಹೇಳಿದರು

Exit mobile version