Home ತಾಜಾ ಸುದ್ದಿ ಚಲಿಸುವ ರೈಲಿನಿಂದ ಬಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರು

ಚಲಿಸುವ ರೈಲಿನಿಂದ ಬಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರು

0

ದಾವಣಗೆರೆ: ಚಲಿಸುವ ರೈಲಿನಿಂದ ಬಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಎದೆ ಜಲ್ಲೆನಿಸಿದೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಸಿದ್ದಗಂಗಾ ರೈಲು ಹತ್ತಲು ಓಡೋಡಿ ಬಂದ ವೃದ್ಧ ಮತ್ತು ಯುವಕ ಆಯತಪ್ಪಿ ಕೆಳಗೆ ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೃದ್ಧ ಬಾಗಿಲಿಗೆ ನಿಂತಿದ್ದ ಯುವಕನನ್ನ ಹಿಡಿದ ಪರಿಣಾಮ ಕೆಳಗೆ ಇಬ್ಬರು ಬಿದ್ದರು. ರೈಲಿನ ಚಕ್ರಕ್ಕೆ ಬೀಳುತಿದ್ದವರನ್ನು ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದರಿಂದ ಆಗುವ ಭಾರೀ ಅಪಘಾತ ತಪ್ಪಿದಂತಾಗಿದೆ. ಸೈದಾ ನಜ್ನೀನ್ ಅನ್ನುವ ವ್ಯಕ್ತಿ ಮೊಬೈಲ್‌ನಲ್ಲಿ ರೀಲ್ಸ್ ಮಾಡುವಾಗ ಈ ಘಟನೆ ನಡೆದಿದ್ದು, ಈ ಅಪಘಾತದ ದೃಶ್ಯ ಸೆರೆಯಾಗಿದೆ.

Exit mobile version