Home ನಮ್ಮ ಜಿಲ್ಲೆ ಧಾರವಾಡ ಗೆಲುವು ನಮ್ಮದೇ: ಅಂತರ ಜನರ ವಿವೇಚನೆಗೆ

ಗೆಲುವು ನಮ್ಮದೇ: ಅಂತರ ಜನರ ವಿವೇಚನೆಗೆ

0

ಧಾರವಾಡ: ಗೆಲುವು ಶತಸಿದ್ಧ. ಆದರೆ, ಮತಗಳ ಅಂತರವನ್ನು ಜನರೇ ತೀರ್ಮಾನ ಮಾಡಲಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.

ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುವಾವಣೆಗೆ ಜನ ಬದಲಾವೆಯನ್ನು ಬಯಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರು, ನಾಯಕರು ಹಾಗೂ ಬೆಂಬಲಿಗರು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ತಮ್ಮ ಬಗ್ಗೆ ಹೇಳಿಕೆ ನೀಡಿರುವ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ತಿರುಗೇಟು ನೀಡಿದ ಅಸೂಟಿ, ದಿಂಗಾಲೇಶ್ವರ ಶ್ರೀಗಳು ಹಿರಿಯರು, ನಡೆದಾಡುವ ದೇವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮ್ಮ ಜಿಲ್ಲೆಯ ನಾಯಕರ, ಕಾರ್ಯಕರ್ತರ ಶಕ್ತಿ ನನಗಿದೆ ಎಂದರು.

Exit mobile version