Home News ಗೃಹಲಕ್ಷ್ಮೀ ಹಣದಿಂದ ಮಗಳಿಗೆ ಕಂಪ್ಯೂಟರ್ ಕೊಡಿಸಿದ ತಾಯಿ

ಗೃಹಲಕ್ಷ್ಮೀ ಹಣದಿಂದ ಮಗಳಿಗೆ ಕಂಪ್ಯೂಟರ್ ಕೊಡಿಸಿದ ತಾಯಿ

ತುಮಕೂರು : ಗೃಹಲಕ್ಷ್ಮಿಹಣವನ್ನು ಕೂಡಿಟ್ಟು ಮಗಳ ವಿದ್ಯಾಭ್ಯಾಸಕ್ಕೆಂದು ಕಂಪ್ಯೂಟರ್‌ ಕೊಡಿಸಿದ್ದಾರೆ. ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ.
ಜಿಲ್ಲೆಯ ತಿಪಟೂರಿನ ಗಾಂಧಿ ನಗರದ ಕೆರಗೋಡಿ ವಾಸಿಗಳಾದ ಸಾಧಿಕ್ ಹಾಗೂ ನಗ್ಮಾ ದಂಪತಿ ತಮ್ಮ ಪುತ್ರಿ ಸೈದಾ ಆಫೀಫಾಗೆ ಓದಲು ಅನುಕೂಲ ಆಗಲೆಂದು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ. ಸೈದಾ ಆಫೀಫಾ ಈ ಕುರಿತಂತೆ ತಾಯಿಗೆ ಧನ್ಯವಾದ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಬಹು ಮೆಚ್ಚುಗೆ ಗಳಿಸಿದೆ. ತಾಯಿ ನಗ್ಮಾ ಬಾನು ಓದಲು ಅನುಕೂಲ ಆಗಲೆಂದು ಮಗಳು ಸೈದಾ ಆಫೀಫಾಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಗೃಹಲಕ್ಷ್ಮಿ ಹಣದ ಜೊತೆಗೆ ಸ್ಕಾಲರ್ ಶಿಪ್ ಹಣ ಕೂಡ ಸೇರಿಸಿ ಕಂಪ್ಯೂಟರ್ ಖರೀದಿಸಿದ್ದು, ಗೃಹಲಕ್ಷ್ಮಿ ಹಣದ ಸದ್ಭಳಕೆಯಿಂದ ಇತರೆ ಪೋಷಕರಿಗೆ ಪ್ರೇರಣೆಯಾಗಿದ್ದಾರೆ.

Exit mobile version