Home News ಗೂಡ್ಸ್ ವಾಹನ ಡಿಕ್ಕಿ: ಇಬ್ಬರ ಸಾವು

ಗೂಡ್ಸ್ ವಾಹನ ಡಿಕ್ಕಿ: ಇಬ್ಬರ ಸಾವು

ಬಳ್ಳಾರಿ: ರಸ್ತೆ ಬದಿ ಚಲಿಸುತ್ತಿದ್ದ ಯುವಕರ ಮೇಲೆ ಸರಕು ಸಾಗಣೆಯ ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಸಿರವಾರ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಆಂಧ್ರದ ನೇಮಕಲ್ ನಿವಾಸಿಗಳಾದ ನಾಗರಾಜ(೧೯), ಗಣೇಶ(೧೮) ಮೃತರು. ಆಂಧ್ರದ ಗೂಳ್ಯಂ ಗ್ರಾಮದಲ್ಲಿ ಜರುಗುವ ಶ್ರೀಗಾದಿಲಿಂಗೇಶ್ವರ ಜಾತ್ರೆ ಅಂಗವಾಗಿ ನೇಮಕಲ್‌ನಿಂದ ಗೂಳ್ಯಂಗೆ ನಾಲ್ವರು ಪಾದಯಾತ್ರೆ ಹೊರಟಿದ್ದರು. ತಡರಾತ್ರಿ ಗೂಡ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚಲಿಸುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದಿದೆ. ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version