Home ಅಪರಾಧ ಗದುಗಿನಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಚಳಿ ಬಿಡಿಸಿದ ಪೊಲೀಸರು

ಗದುಗಿನಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಚಳಿ ಬಿಡಿಸಿದ ಪೊಲೀಸರು

0

ಗದಗ: ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ಮಾಫಿಯಾ ಎಗ್ಗಿಲ್ಲದೆ ನಡೆದಿದ್ದು, ಭಾನುವಾರ ಮುಂಜಾನೆ ಪೊಲೀಸರು ಗದಗ-ಬೆಟಗೇರಿ ನಗರದಲ್ಲಿನ ೧೨ ಜನ ಮೀಟರ್ ಬಡ್ಡಿ ದಂಧೆಕೋರರ ಮನೆಯ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ನಗದು ಹಣ, ಖಾಲಿ ಚೆಕ್, ಬಾಂಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಅವಳಿ ನಗರದಲ್ಲಿ ೧೨ ಕಡೆ ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ದಾಳಿ ವೇಳೆ ನಗದು, ಬಾಂಡ್, ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಸಂಗಮೇಶ ದೊಡ್ಡಣ್ಣವರ ಎಂಬುವರ ಮನೆಯಲ್ಲಿ ೨೬ ಲಕ್ಷದ ೫೭ ಸಾವಿರ ನಗದು, ಖಾಲಿ ಬಾಂಡ್, ಚೆಕ್ ಮತ್ತು ದಾಖಲೆ ಪತ್ರಗಳು ಪತ್ತೆಯಾಗಿವೆ. ರವಿ ಕೌಜಗೇರಿ ಎಂಬುವರ ಮನೆಯಲ್ಲಿ ಚೆಕ್, ಬಾಂಡ್, ಹಣ ಎಣಿಸುವ ಮಷಿನ್ ಪತ್ತೆಯಾಗಿದೆ.
ಇಂದು ದಾಳಿಗೊಳಗಾಗಿರುವರಲ್ಲಿ ಕೆಲವರು ನೋಂದಣಿ ಮಾಡಿಸಿ ವ್ಯವಹಾರ, ಕೆಲವರು ಅನಧಿಕೃತವಾಗಿ ದಂಧೆ ಮಾಡುತ್ತಿದ್ದರು. ಮೀಟರ್ ಬಡ್ಡಿ ದಂಧೆಯಲ್ಲಿ ಹಲವು ರೌಡಿಶೀಟರ್‌ಗಳು ಸಹ ಭಾಗಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version