Home ನಮ್ಮ ಜಿಲ್ಲೆ ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ

ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ

0

ಬೆಂಗಳೂರು: ಕೆಲವು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ನಮ್ಮ ಸರ್ಕಾರ ಬಂದ ಮೇಲೆ ಪಡೆದುಕೊಂಡಿಲ್ಲ ಮತ್ತು ಪಡೆದುಕೊಳ್ಳುವುದು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೆಲವು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ನಮ್ಮ ಸರ್ಕಾರ ಬಂದ ಮೇಲೆ ಪಡೆದುಕೊಂಡಿಲ್ಲ ಮತ್ತು ಪಡೆದುಕೊಳ್ಳುವುದು ಇಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸಾವಿರಾರು ‘ಸಿ’ ದರ್ಜೆ ದೇವಸ್ಥಾನಗಳು ಇದ್ದು, ಖಾಸಗಿಯವರು ದತ್ತು ಪಡೆದುಕೊಂಡು ಹೆಚ್ಚಿನ ಅಭಿವೃದ್ಧಿ ಮಾಡಲು ಇಚ್ಛಿಸಿದರೆ ಅವುಗಳನ್ನು ಸಹ ನೀಡುತ್ತೇವೆ ಎಂದಿದ್ದಾರೆ.

Exit mobile version