Home News ಕೋವಿಡ್ ಪ್ರಕರಣದಲ್ಲಿ ಹಣ ವಸೂಲಿ: ಮೂರು ರೋಗಿಗಳಿಗೆ 4.68 ಲಕ್ಷ ವಾಪಸ್

ಕೋವಿಡ್ ಪ್ರಕರಣದಲ್ಲಿ ಹಣ ವಸೂಲಿ: ಮೂರು ರೋಗಿಗಳಿಗೆ 4.68 ಲಕ್ಷ ವಾಪಸ್

ಧಾರವಾಡ: ಜಿಲ್ಲೆಯಲ್ಲಿಯೂ ಸುಮಾರು 4 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕೋವಿಡ್ ರೋಗಿಗಳಿಂದ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸುಲಿಗೆ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿ ಸುಲಿಗೆ ಮಾಡಿದ ಜನರಿಗೆ ಹಣ ಮರಳಿಸುವಂತೆ ಸೂಚಿಸಿದೆ.
ಧಾರವಾಡ ಮಾತ್ರವಲ್ಲದೇ ಹುಬ್ಬಳ್ಳಿಯಲ್ಲಿಯೂ ಸಣ್ಣಪುಟ್ಟ ಆಸ್ಪತ್ರೆಗಳು ದೊಡ್ಡ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಕೇಸ್‌ಗೂ ಸುಲಿಗೆ ಮಾಡುವ ಕಾರ್ಯದಲ್ಲಿ ನಿರತವಾಗಿದ್ದವು. ಸಾಕಷ್ಟು ಬಾರಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಸೂಚನೆಯನ್ನೂ ನೀಡಲಾಗಿತ್ತು. ಆದರೂ ಅದಕ್ಕೆ ಕಿವಿಗೊಟ್ಟಿರಲಿಲ್ಲ.
ಸದ್ಯ ಆರೋಗ್ಯ ಸಚಿವಾಲಯ ತೆಗೆದುಕೊಂಡಿರುವ ಕ್ರಮದಲ್ಲಿ ಧಾರವಾಡದ ಮೂರು ಆಸ್ಪತ್ರೆಗಳು ಜನರಿಂದ ಸುಲಿಗೆ ಮಾಡಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಪಡೆದು ಗುಣಮುಖರಾದ ಈ ರೋಗಿಗಳಿಗೆ ಸುಮಾರು 4,68,125 ರೂ.ಗಳನ್ನು ಮರಳಿ ಕೊಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕರಿಗೌಡರ ತಿಳಿಸಿದ್ದಾರೆ.

ಕೋವಿಡ್
Exit mobile version