Home ತಾಜಾ ಸುದ್ದಿ ಸತ್ತು ಬದುಕಿ ಪವಾಡ ಸೃಷ್ಟಿಸಿದ್ದ ದ್ಯಾಮಣ್ಣ ಇನ್ನಿಲ್ಲ

ಸತ್ತು ಬದುಕಿ ಪವಾಡ ಸೃಷ್ಟಿಸಿದ್ದ ದ್ಯಾಮಣ್ಣ ಇನ್ನಿಲ್ಲ

0

ಇಳಕಲ್ ‌:  ಇಲ್ಲಿನ ಮುರ್ತುಜಾ ಖಾದ್ರಿ ದರ್ಗಾದಲ್ಲಿ ಮಗು ಪವಾಡ ಸದೃಶದಲ್ಲಿ ಬದುಕಿತು ಎಂದು ಹೇಳಲಾದ ಮಗು ಕೊನೆಗೂ ಮೂರು ದಿನಗಳ ಜೀವನ್ಮರಣದ ಹೋರಾಟದಲ್ಲಿ ಹೆಣಗಾಡಿ ಪ್ರಾಣ ಬಿಟ್ಟಿದೆ.
ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗು ಮರಣ ಹೊಂದಿದೆ ಎಂದು ಪಾಲಕರು ತಮ್ಮ ಸಂಬಂಧಿಕರಿಗೆ ತಿಳಿಸಿ ಅಂತ್ಯಸಂಸ್ಕಾರಕ್ಕೆ ಬರಲು ಹೇಳಿ ಮರಳಿ ಇಳಕಲ್ ದತ್ತ ಬರುತ್ತಿದ್ದಾಗ ಮಗುವಿನಲ್ಲಿ ಆದ ಬದಲಾವಣೆಯಿಂದ ಅದನ್ನು ದರ್ಗಾಕ್ಕೆ ತೆಗೆದುಕೊಂಡು ಹೋಗಲಾಗಿತ್ತು .ಅಲ್ಲಿ ಇನ್ನೂ ಜೀವವಿದೆ ಎಂದು ತಿಳಿದ ನಂತರ ಮಗುವನ್ನು ಮಹೇಶ್ವರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಾವು ಬದುಕಿನ ಮಧ್ಯ ಹೋರಾಡಿದ ಒಂದು ವರ್ಷದ ಮಗು ದ್ಯಾಮಣ್ಣ ಬಸವರಾಜ ಭಜಂತ್ರಿ ಶನಿವಾರದಂದು ಕೊನೆಯುಸಿರು ಎಳೆಯಿತು.

Exit mobile version