Home News ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ಮೂವರ ಬಂಧನ

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ಮೂವರ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಕಾರು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿತ್ತು.
ಬಂಧನಕ್ಕೆ ಒಳಗಾದ ಮೂವರು ಬೆಳಗಾವಿ ಜಿಲ್ಲೆಯವರಾಗಿದ್ದು, ಪರೀಕ್ಷಾರ್ಥಿಯ ಸಂಬಂಧಿಗಳಾದ ಇವರಲ್ಲಿ ಇಬ್ಬರು ಪರೀಕ್ಷಾ ಕೇಂದ್ರದಲ್ಲಿರುವ ತಮ್ಮ ಸಂಬಂಧಿಗಳಿಗೆ ಮೊಬೈಲ್ ಪೂರೈಸಲು ಹೊರಟಿದ್ದರು. ಆದರೆ ಪರೀಕ್ಷಾ ಕೇಂದ್ರದಲ್ಲಿ ಅದನ್ನು ಬಳಸಲಾಗಲಿಲ್ಲ ಎಂದು ಗೊತ್ತಾಗಿದೆ.
ಇನ್ನೊಬ್ಬ ಉಪನ್ಯಾಸಕರು ಗದುಗಿನಿಂದ ಬಂದ ಪ್ರಶ್ನೆಪತ್ರಿಕೆಯನ್ನು ಬಿಡಿಸಿ ತಾವೇ ಅರ್ಧದಷ್ಟು ಉತ್ತರ ಪತ್ರಿಕೆ ಬರೆದಿದ್ದರೆನ್ನಲಾಗಿದೆ. ಅವರು ಈಗ ಬಂಧಿತ ಇನ್ನಿಬ್ಬರು ಆರೋಪಿತರಿಂದ ಎರಡು ಮೊಬೈಲ್‌ಗಳನ್ನು ಕಮತನೂರು ಗೇಟ್ ಬಳಿ ಸ್ವೀಕರಿಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

KPTCL Exam
Exit mobile version