ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ದತ್ತರಾಜಪುರದ ಸಮೀಪ ರಚಿತ್ (8) ಎಂಬ ಬಾಲಕ ಕೆಎಫ್‌ಡಿಗೆ ತುತ್ತಾಗಿ ಸಾವು ಕಂಡ ಘಟನೆ ನಡೆದಿದೆ. ಈತನ ಸಹೋದರಿಗೂ ಕೆಎಫ್‌ಡಿ ಸೋಂಕು ತಗುಲಿದ್ದು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಸಹೋದರಿ ಚೇತರಿಕೆಗೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್‌ಗೆ ನೀಡಿದ ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.