Home News ಕೃಷ್ಣೆಯಲ್ಲಿ ಸಿಎಂ ಸಿದ್ದು, ಡಿಕೆಶಿಗೆ ಶ್ರದ್ಧಾಂಜಲಿ

ಕೃಷ್ಣೆಯಲ್ಲಿ ಸಿಎಂ ಸಿದ್ದು, ಡಿಕೆಶಿಗೆ ಶ್ರದ್ಧಾಂಜಲಿ

ಆಲಮಟ್ಟಿ: ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರೈತ ಸಂಘದ ಕಾರ್ಯಕರ್ತರು ಆಲಮಟ್ಟಿಯ ಕೃಷ್ಣಾನದಿ ಹಿನ್ನೀರಿನಲ್ಲಿ ಪಿಂಡ ಬಿಡುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ರೈತರ ವಿರೋಧದ ನಡುವೆ ತೆಲಂಗಾಣ ರಾಜ್ಯಕ್ಕೆ ಆಲಮಟ್ಟಿ ಜಲಾಶಯದಿಂದ ೧ ಟಿಎಂಸಿ ನೀರು ಹರಿಸಿದರಿಂದ ಮಾ. ೧ರಂದು ವಿಜಯಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಪ್ರಕೃತಿ ದಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ತೆಲಂಗಾಣ ಸರ್ಕಾರ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಎತ್ತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಕೋರ್ಟ್‌ನಲ್ಲಿ ತಡೆ ಹಿಡಿಯಲಾಯಿತು. ಆದರಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಮೂಲಕ ಮನವಿ ಮಾಡಿದ್ದರೂ ನೀರು ಹರಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು:
ತೆಲಂಗಾಣ ರಾಜ್ಯ ಐದು ಟಿಎಂಸಿ ನೀರು ಬಿಡಿ ಅಂತ ಮನವಿ ಕೊಟ್ಟಿದ್ದರು, ಅಧಿಕಾರಿಗಳು ೧.೨೭ ಟಿಎಂಸಿ ನೀರು ಬಿಡುತ್ತೇವೆ ಎಂದು ರೈತರಿಗೆ ನಂಬಿಸಿ ಆಲಮಟ್ಟಿ ಜಲಾಶಯದಿಂದ ೧೦ಟಿಎಂಸಿ ನೀರು ಹರಿಸಿದ್ದಾರೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ೧.೨೭ ಟಿಎಂಸಿ ನೀರು ಅಷ್ಟೇ ಹರಿಸಿದ್ದವೇ ಎಂದು ಸುಳ್ಳು ಹೇಳಿದ್ದಾರೆ. ಅವಳಿ ಜಿಲ್ಲೆಯ ರೈತರಿಗೆ ಅಧಿಕಾರಿಗಳು ಮೋಸ್ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಕೇಂದ್ರಕ್ಕೆ ಪತ್ರ ಬರೆಯ ಮೂಲಕ ಇಡೀ ರಾಜ್ಯದ ರೈತರನ್ನು ಹಾಗೂ ಜಿಲ್ಲೆಯ ರೈತರನ್ನು ಉಳಿಸಬೇಕು ಎಂದು ಮನವಿ ಮಾಡಿದರು. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಇಲ್ಲಾ ಅಂದ್ರೆ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಕಚೇರಿಗೆ ಬೀಗ ಜಡೆದು ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ರೈತ ಸಂಘ ಎಚ್ಚರಿಕೆ ನೀಡಿತು.

Exit mobile version