Home ಅಪರಾಧ ಕಾಶಿಯಲ್ಲಿ ಬಾಗಲಕೋಟೆ ವ್ಯಕ್ತಿ ಸಾವು

ಕಾಶಿಯಲ್ಲಿ ಬಾಗಲಕೋಟೆ ವ್ಯಕ್ತಿ ಸಾವು

0

ಬಾಗಲಕೋಟೆ: ಮಹಾಕುಂಭಮೇಳಕ್ಕೆ ತೆರಳಿದ್ದ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು ಕಾಶಿಯ ಗಂಗಾನದಿಯಲ್ಲಿ ಸ್ನಾನ ಮಾಡುವ ವೇಳೆ ಅಸುನೀಗಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಸತೀಶ ಜೋಶಿ(೪೪) ಮೃತ ದುರ್ದೈವಿ.

ವಾರದ ಹಿಂದೆ ಸತೀಶ ಕೆಲ ಸಿಬ್ಬಂದಿಯೊಂದಿಗೆ ಕಾಶಿಗೆ ಪ್ರಯಾಣ ಕೈಗೊಂಡಿದ್ದರು. ಪ್ರಯಾಗರಾಜದ ಕಂಭಮೇಳದಲ್ಲಿ ಭಾಗಿಯಾಗಿ ನಂತರ ಕಾಶಿಗೆ ತೆರಳಿದ್ದರು.

ರವಿವಾರ ನದಿಯಲ್ಲಿ ಸ್ನಾನ ಮಾಡುವ ಮೂರು ಬಾರಿ ಮುಳುಗಿದ್ದು, ಮೂರನೇ ಬಾರಿಗೆ ಹೊರ ಬರದಿದ್ದಾಗ ಅವರು ಜೀವ ಬಿಟ್ಟಿರುವುದು ಗೊತ್ತಾಗಿದೆ. ಸ್ನಾನದ ವೇಳೆ ಹೃದಯಾಘಾತ ಸಂಭವಿಸಿ ಅವರು ಜೀವ ಬಿಟ್ಟಿದ್ದಾರೆ ಎಂದು‌‌ ತಿಳಿದು ಬಂದಿದೆ.

Exit mobile version