Home News ಕಾಲ್ತುಳಿತ ಪ್ರಕರಣ: ಜೂ.10ಕ್ಕೆ ​ವಿಚಾರಣೆ

ಕಾಲ್ತುಳಿತ ಪ್ರಕರಣ: ಜೂ.10ಕ್ಕೆ ​ವಿಚಾರಣೆ

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನ ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ.
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಪಿಐಎಲ್ ವಿಚಾರಣೆ ನಡೆದಿದ್ದು, ಸ್ಟೇಡಿಯಂನಲ್ಲಿ ಎಷ್ಟು ಗೇಟ್‌ಗಳಿವೆ ಎಷ್ಟು ಗೇಟ್ ತೆರೆಯಲಾಗಿತ್ತು ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಜಿ ಶಶಿಕುಮಾರ್ ಶೆಟ್ಟಿ, 21 ಗೇಟ್ ಓಪನ್ ಮಾಡಲಾಗಿತ್ತು ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಬಂದಿದ್ದರು. 2 ಲಕ್ಷ ಜನರು ಸ್ಟೇಡಿಯಂ ಸುತ್ತಲೇ ಇದ್ದರು. ಬೆಂಗಳುರಿನ ಜಿಲ್ಲಾ ಉಸ್ತುವಾರಿ ಸಚಿವರೂ ಪರಿಶೀಲಿಸುತ್ತಿದ್ದರು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ತನಿಖೆಯ ನಂತರ ಸಂಪೂರ್ಣ ಸತ್ಯ ಹೊರಬರಲಿದೆ ಎಂದರು. ಆರ್‌ಸಿಬಿ ಆಟಗಾರರು ರಾಜ್ಯಕ್ಕೆ ದೇಶಕ್ಕೆ ಆಡುತ್ತಿಲ್ಲ ರಾಜ್ಯ ಸರ್ಕಾರ ಇವರನ್ನ ಗೌರವಿಸುವ ಅಗತ್ಯವಿರಲಿಲ್ಲ ಇದರಿಂದ ಸಮಸ್ಯೆಯಾಗಿದೆ ಎಂದು ವಕೀಲ ಹೇಮಂತ್ ರಾಜ್ ವಾದಿಸಿದರು. ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ, ಘಟನೆ ಕುರಿತು ವರದಿ ಸಲ್ಲಿಸುವಂತಡ ಸೂಚಿಸಿ ವಿಚಾರಣೆಯನ್ನ ಜೂನ್ 10ಕ್ಕೆ ನಿಗದಿಪಡಿಸಿತು.

Exit mobile version