Home ತಾಜಾ ಸುದ್ದಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ  ದಾಳಿ

ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ  ದಾಳಿ

0

ಧಾರವಾಡ: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಾಲೂಕಿನ ಹೆಬ್ಬಳ್ಳಿ ಮತ್ತು ಶಿವಳ್ಳಿಯಲ್ಲಿರುವ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಸೋಮವಾರ ರಾತ್ರಿ ದಾಳಿ ನಡೆಸಿದೆ.

ಹೆಬ್ವಳ್ಳಿ ಗ್ರಾಮದ ಈರಣ್ಣ ಶಿವಳ್ಳಿ ಹಾಗೂ ಶಿವಳ್ಳಿ ಗ್ರಾಮದ ಫೈರೋಜ್ ನಾಯ್ಕರ್ ಎಂಬುವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹಂಚಲು ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ಹಣ ಸಂಗ್ರಹಿಸಿಟ್ಡಿದ್ದಾರೆ ಎಂಬ ಸುಳಿವಿನ ಮೇಲೆ ದಾಳಿ ನಡೆಸಿದ ಐಟಿ ತಂಡ ಬರಿಗೈಲಿ ವಾಪಸಾಗಿದೆ.
ಐಟಿ ಅಧಿಕಾರಿಗಳ ತಂಡಕ್ಕೆ ಏನು ಸಿಕ್ಕಿಲ್ಲ. ಈರಣ್ಣ ಶಿವಳ್ಳಿ ಅವರ ಮನೆಯಲ್ಲಿ ಕೆಲ ದಾಖಲೆ ಪರಿಶೀಲಿಸಿ ವಾಪಸ್ಸಾಗಿದೆ ಎಂದು ತಿಳಿದಿದೆ.

Exit mobile version