Home ತಾಜಾ ಸುದ್ದಿ ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ

ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ

0

ಬೆಂಗಳೂರು: ಕನ್ನಡಿಗರು ಕೂಡ ಕರ್ನಾಟಕವನ್ನ ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬೆಂಗಳೂರು ಶಾಸಕರಿಗೆ ಅನುದಾನ ಬೇಕಾದರೆ ಡಿಸಿಎಂ ಡಿ. ಕೆ. ಶಿವಕುಮಾರ ಅವರ ಬಳಿ ತಗ್ಗಿ-ಬಗ್ಗಿ ನಡೆಯಬೇಕು. ಇನ್ನುಳಿದ ಜಿಲ್ಲೆಗಳ ಶಾಸಕರಿಗೆ ಅನುದಾನ ಬೇಕಾದರೆ ಸಿಎಂ ಸಿದ್ದರಾಮಯ್ಯ ಅವರ ಕಾಲು ಹಿಡಿದುಕೊಳ್ಳಬೇಕು. 135 ಸೀಟು ಗೆಲ್ಲಿಸಿ ಅಧಿಕಾರ ಕೊಟ್ಟ ಕರ್ನಾಟಕದ ಮತದಾದರಿಗೆ ಇದೇನಾ ಕಾಂಗ್ರೆಸ್‌ ಪಕ್ಷ ಕೊಡುವ ಮರ್ಯಾದೆ? ಅಧಿಕಾರದ ಮದದಿಂದ ಈ ರೀತಿ ದುರಹಂಕಾರ ಮೆರೆದ ಮೊಘಲರು, ಸುಲ್ತಾನರು, ನವಾಬರು, ನಿಜಾಮರು ಇತಿಹಾಸದಲ್ಲಿ ಅಡ್ರೆಸ್ ಇಲ್ಲದೆ ಕಣ್ಮರೆ ಆಗಿದ್ದಾರೆ. ಕನ್ನಡಿಗರು ಕೂಡ ಕರ್ನಾಟಕವನ್ನ ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದಿದ್ದಾರೆ.

Exit mobile version