Home ತಾಜಾ ಸುದ್ದಿ ಕಾಂಗ್ರೆಸ್‌ ಜನಾಕ್ರೋಶ ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ಪೊಲೀಸ್‌ ಅಧಿಕಾರಿ ವಿರುದ್ಧವೇ ಸಿಎಂ ಗರಂ

ಕಾಂಗ್ರೆಸ್‌ ಜನಾಕ್ರೋಶ ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ಪೊಲೀಸ್‌ ಅಧಿಕಾರಿ ವಿರುದ್ಧವೇ ಸಿಎಂ ಗರಂ

0

ಬೆಳಗಾವಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್‌ ಆಯೋಜಿಸಿರುವ ಜನಾಕ್ರೋಶ ಸಭೆಯಲ್ಲಿ ಸಿಎಂ ಭಾಷಣ ಮಾಡುವಾಗ ಕಪ್ಪು ಬಾವುಟ ಪ್ರದರ್ಶನ ಮಾಡಿದ ಮಹಿಳೆಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್‌ ಅಧಿಕಾರ ವಿರುದ್ಧವೇ ಗರಂ ಆದ ಘಟನೆಯು ಸಹ ನಡೆಯಿತು. ಕಪ್ಪು ಬಾವುಟ ಪ್ರದರ್ಶನ ಮಾಡಿದ ಮಹಿಳೆಯನ್ನ ವಶಕ್ಕೆ ಪಡೆದು ಕರೆದುಕೊಂಡು ಹೋಗುವುವಾಗ ಕಾಂಗ್ರೆಸ್‌ ಕಾರ್ಯಕರ್ತರು ವಾಹನಕ್ಕೆ ಮುತ್ತಿಗೆ ಹಾಕಿದರು, ಇದೇ ಸಂದರ್ಭದಲ್ಲಿ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪೋಲಿಸರನ್ನೇ ತರಾಟೆಗೆ ತೆಗೆದುಕೊಂಡರು, ನಂತರ ಕಾರ್ಯಕ್ರಮ ಬಿಟ್ಟು ಪೋಲಿಸ್ ಸ್ಟೇಷನಗೆ ತೆರಳಿದರು.

ಕಾಂಗ್ರೆಸ್‌ ಜನಾಕ್ರೋಶ ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ಪೊಲೀಸ್‌ ಅಧಿಕಾರಿ ವಿರುದ್ಧವೇ ಸಿಎಂ ಗರಂ

Exit mobile version