Home ನಮ್ಮ ಜಿಲ್ಲೆ ಧಾರವಾಡ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿಯೇ ವ್ಯಕ್ತಿಯ ಕೊಲೆ

ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿಯೇ ವ್ಯಕ್ತಿಯ ಕೊಲೆ

0

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿಯೇ ವ್ಯಕ್ತಿಯೊಬ್ಬನ್ನನ್ನು ಕೊಲೆ ಮಾಡಿ ಸುಟ್ಟ ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ನಿನ್ನೇ ತಡರಾತ್ರಿ ಸುಮಾರು 25 ರಿಂದ 30 ವರ್ಷದ ಯುವಕನ ಶವ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂಭಾಗದಲ್ಲಿರುವ ರೈಲ್ವೇ ಜಾಗದಲ್ಲಿ ಸಿಕ್ಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತಪಟ್ಟ ವ್ಯಕ್ತಿ ಯಾರು ಎಂಬ ಮಾಹಿತಿ ಕಲೆ ಹಾಕಲು ಮುಂದಾಗುತ್ತಿದ್ದಾರೆ.

Exit mobile version