Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕರ್ಕೇಶ್ವರದಲ್ಲಿ ಕೆಎಫ್‌ಡಿ ಪತ್ತೆ

ಕರ್ಕೇಶ್ವರದಲ್ಲಿ ಕೆಎಫ್‌ಡಿ ಪತ್ತೆ

0

ಬಾಳೆಹೊನ್ನೂರು: ಎನ್.ಆರ್.ಪುರ ತಾಲ್ಲೂಕು ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕರ್ಕೇಶ್ವರ ಗ್ರಾ.ಪಂ.ಯ ಕರ್ಕೇಶ್ವರ ಗ್ರಾಮದಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಪ್ರಕರಣ ದಾಖಲಾಗಿದೆ.
೪೬ ವರ್ಷದ ಮಹಿಳೆಯೊಬ್ಬರಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿದ್ದು, ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಮಂಗನಕಾಯಿಲೆ ಸೋಂಕು ಪತ್ತೆಯಾದ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸುತ್ತಲಿನ ಗ್ರಾಮಸ್ಥರಿಗೆ ಅಗತ್ಯ ಮುಂಜಾಗರೂಕ ಔಷಧಿಗಳನ್ನು ವಿತರಣೆ ಮಾಡಿದ್ದಾರೆ.

Exit mobile version