Home News ಕರಾವಳಿಯಲ್ಲಿ ಸುರಕ್ಷತೆ: ಕಣ್ಗಾವಲಿಗೆ ಸೂಚನೆ

ಕರಾವಳಿಯಲ್ಲಿ ಸುರಕ್ಷತೆ: ಕಣ್ಗಾವಲಿಗೆ ಸೂಚನೆ

ಕಾರವಾರ: ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕೂಡ ಕಣ್ಗಾವಲು ಇರಿಸಲಾಗಿದೆ.
ಮೀನುಗಾರರು ಕಡಲಿನಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಬೋಟ್‌ಗಳು, ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ಬೈತಖೋಲದ ಮೀನುಗಾರರ ಫೆಡರೇಷನ್ ಕಚೇರಿಯಲ್ಲಿ ಶುಕ್ರವಾರ ಮೀನುಗಾರರೊಂದಿಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತುರ್ತು ಸಭೆ ನಡೆಸಿದರು.
ಶತ್ರುಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು. ಕರಾವಳಿಯಲ್ಲಿ ಅಡಗಿ ಕೂರುವ ಇಲ್ಲವೇ ಮದ್ದು ಗುಂಡು ಸಂಗ್ರಹಿಸುವ ಸಾಧ್ಯತೆ ಕೂಡ ಇದೆ. ಮೇ 12ರಂದು ಅಣಕು ಕಾರ್ಯಾಚರಣೆಯಲ್ಲಿ ಬೋಟುಗಳ ಕಲಾಸಿಗಳ ವಿವರ ನೀಡಬೇಕು. ಹೊರ ರಾಜ್ಯದ ದೋಣಿಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ ಮತ್ತು ಕರಾವಳಿ ಕಾವಲುಪಡೆಯ ಇನ್ಸಪೆಕ್ಟರ್ ನಿಶ್ಚಲ ಕುಮಾರ ಸಭೆಯಲ್ಲಿ ತಿಳಿಸಿದರು.

Exit mobile version