Home ತಾಜಾ ಸುದ್ದಿ ಒಂದೇ ದಿನ ೬೪ ಕೋಟಿ ಮತ ಎಣಿಕೆಗೆ ಮಸ್ಕ್ ಶ್ಲಾಘನೆ

ಒಂದೇ ದಿನ ೬೪ ಕೋಟಿ ಮತ ಎಣಿಕೆಗೆ ಮಸ್ಕ್ ಶ್ಲಾಘನೆ

0

ಎಲಾನ್‌ನವದೆಹಲಿ: ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಭಾರತದ ಚುನಾವಣಾ ಪ್ರಕ್ರಿಯೆಗೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ೨೦೨೪ರ ಲೋಕಸಭಾ ಚುನಾವಣೆ ಹಾಗೂ ಅಮೆರಿಕದ ಅಧ್ಯಕ್ಷರ ಚುನಾವಣೆ ನಡುವೆ ತುಲನೆ ಮಾಡಿದ ಅವರು, ಭಾರತ ಒಂದೇ ದಿನ ೬೪ ಕೋಟಿ ಮತಗಳನ್ನು ಎಣಿಕೆ ಮಾಡಿದರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಮತ ಎಣಿಕೆ ಮುಂದುವರಿದಿದೆ ಎಂದು ತಮ್ಮ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ಒಂದು ದಿನ ಬಳಿಕ ಮಸ್ಕ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಮೋಸ ಮಾಡುವುದು ಚುನಾವಣೆಯ ಮೂಲ ಗುರಿಯಾಗಿಲ್ಲ ಎಂದೂ ಹೇಳಿದ್ದಾರೆ.

Exit mobile version