Home ತಾಜಾ ಸುದ್ದಿ ಒಂದು ಚುನಾವಣೆ, ಕಾಂಗ್ರೆಸ್‌ಗೆ ಹತಾಶೆ

ಒಂದು ಚುನಾವಣೆ, ಕಾಂಗ್ರೆಸ್‌ಗೆ ಹತಾಶೆ

0

ಹುಬ್ಬಳ್ಳಿ: ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು `ಒಂದು ದೇಶ ಒಂದು ಚುನಾವಣೆ’ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸುವುದು ಸಹಜ. ಈ ದೇಶದಲ್ಲಿ ಬಿಜೆಪಿಯೇ ಬಲಿಷ್ಠವಾಗಿರಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ತಮ್ಮ ಪಕ್ಷ ಎಂದಿಗೂ ಅಧಿಕಾರಕ್ಕೆ ಬರೋದಿಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೇ ಮನವರಿಕೆ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ಸಚಿವ ಜೋಶಿ ಹೇಳಿದರು.

Exit mobile version