Home News ಏಷ್ಯಾದ MRO ಕೇಂದ್ರʼವಾಗಿ ಬೆಂಗಳೂರು

ಏಷ್ಯಾದ MRO ಕೇಂದ್ರʼವಾಗಿ ಬೆಂಗಳೂರು

ಬೆಂಗಳೂರು: ಏಷ್ಯಾದ MRO ಕೇಂದ್ರʼವಾಗಿ ಬೆಂಗಳೂರು ಬೆಳೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ₹ 1,100 ಕೋಟಿ ವೆಚ್ಚದಲ್ಲಿ 31ಎಕರೆಗಳಲ್ಲಿ ಇಂಡಿಗೊ MRO ಕೇಂದ್ರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (Maintenance, Repair & Overhaul-MRO) ಸೌಲಭ್ಯ ಆರಂಭಿಸಲು ₹1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ. ಈ ‘ಅತ್ಯಾಧುನಿಕ MRO ಕೇಂದ್ರ’ವನ್ನು 31 ಎಕರೆ ಭೂಭಾಗದಲ್ಲಿ ನಿರ್ಮಿಸಲಿದೆ.

ಇಂಡಿಗೊ-ದ ಈ ಮಹತ್ವದ ನಿರ್ಧಾರ ಸ್ವಾಗತಾರ್ಹ ಅತ್ಯಾಧುನಿಕ ʼಎಂ.ಆರ್.ಒ’ ಸೌಲಭ್ಯಕ್ಕೆ ಇಂಡಿಗೊ ಮಾಡಲಿರುವ ಬಂಡವಾಳ ಹೂಡಿಕೆಯು, ಕರ್ನಾಟಕವನ್ನು ಏಷ್ಯಾದ ʼಎಂ.ಆರ್.ಒʼ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮುನ್ನೋಟವನ್ನು ಬಲಪಡಿಸಲಿದೆ.

ಈ ಉಪಕ್ರಮವು ರಾಜ್ಯದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಬೆಂಗಳೂರಿನಲ್ಲಿ ಜಾಗತಿಕ ಸ್ಪರ್ಧಾತ್ಮಕ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ. ಏರ್ ಇಂಡಿಯಾ, ಟಿಎಎಸ್ಎಲ್, ಎಚ್ಎಎಲ್ – MRO ಸೌಲಭ್ಯಗಳ ಸಾಲಿಗೆ ಈಗ ಇಂಡಿಗೊ ಸೇರ್ಪಡೆಯು ವಿಮಾನಯಾನ ಕ್ಷೇತ್ರದಲ್ಲಿನ ನಾವೀನ್ಯತೆ, ತಯಾರಿಕೆ ಮತ್ತು ನಿರ್ವಹಣೆ ವಲಯಗಳಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಆದ್ಯತಾ ತಾಣವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದಿದ್ದಾರೆ.

Exit mobile version